123/A, Miranda City Likaoli Prikano, Dope
+0989 7876 9865 9
+(090) 8765 86543 85
Krishnakamala Vedantapathashala was started in the year 2012 on the auspicious day of Vyshakha Shuddha Panchami – Shankara Jayanti. Since then, for about six years in our Pathashala of Uttarahalli, weekly classes on Prasthanatraya Shankarabhashyas were being conducted traditionally. Thereafter during Covid period, the physical classes were discontinued and online classes, on the model devised by Brahmibhutha Seer Sri Satchidanandendra Saraswati of Holenarasipura have been commenced on daily basis and the same is being continued. Apart from this, the study of Sri Sri's significant Sanskrit works like Sugama, Mandookyarahasyavivritih, Vedantaprakriyapratyabhijna etc. are also being studied. All these lessons are available on YouTube kkvp.
Under the aegis of our school, online discourses on various features of Advaitasiddhanta by famous Vedantic Scholars of India are also being organized regularly. Among others, the important personalities who have delivered discourses are Mahamahopadhyaya Dr. K.G Subrayasharma, Pujya Swamy Kaivalyanandasaraswati, Late Dr. M.L Narasimhamurthy, Dr. Kuppa Vishwanatha Sharma, Dr. H.V Nagaraja Rao, Dr. T.V Sathyanarayana, Mahamahopadhyaya Dr. S. Rangantah, Vidushi Manjushri Hegde and Vidushi Dr. S.R Leela.
Our school has developed and released a Mobile App called Bhashyapeeyushadhara. It includes the Mantras and Shankarabhashyas (both in script & audio form) of Isha, Kena, Katha, Prashna, Mundaka, Mandukya and Aitareya Upanishads, complete Vedantamimamsa sutras of Bhagavan Badarayanacharya and Shankarabhashya for Adhikaranapanchaka. The Upanishad mantras and its Shankarabhashyas, which are the precious treasure of our India, can be listened daily by downloading the App. This App can be downloaded freely from Google Playstore on any Android Phone by typing kkvp. Once downloaded and installed on a mobile phone, the contents can be accessed offline too.
Now, in “Sudhasinchana” the quarterly Journal section of this Website, interesting and valuable articles on topics related to shastra and literature, authored by renowned and distinguished Indian and Foreign Scholars, will be published. All are requested to take advantage of this and are further requested to share the same in their exclussive groups.
Home Page Shlokas Raga Composition
Music Guru : Vidushi Smt Geeta
Singers- the Disciples
Chi || Rajshree Swati
Chi || Jayashree Shruti
Chi || Chinmayi
Chi || Rakshita
Chi || Apurva
Chi || Shreya
ಕೃಷ್ಣಕಮಲ ವೇದಾನ್ತಪಾಠಶಾಲೆಯು 2012 ನೇ ಇಸವಿ ವೈಶಾಖ ಶುದ್ಧ ಪಞ್ಚಮಿಯ ಶ್ರೀಶಙ್ಕರಜಯನ್ತೀ ಶುಭದಿನದಂದು ಪ್ರಾರಂಭವಾಯಿತು. ಅಲ್ಲಿಂದ ಸುಮಾರು ಆರು ವರ್ಷಗಳವರೆಗೆ ಉತ್ತರಹಳ್ಳಿಯ ಪಾಠಶಾಲೆಯಲ್ಲಿ ಪ್ರತಿದಿನವೂ ಪ್ರಸ್ಥಾನತ್ರಯಶಾಙ್ಕರಭಾಷ್ಯಪಾಠಗಳು ಸಂಪ್ರದಾಯಕ್ರಮದಂತೆ ನಡೆಯುತ್ತಿತ್ತು. ನಂತರ ಕೋವಿಡ್ ವ್ಯಾಧಿಯ ಕಾಲದಲ್ಲಿ ನಿಯಮದಂತೆ ಆನ್ ಲೈನ್ ಮುಖಾಂತರ ಪ್ರಾರಂಭವಾಗಿ ಇಂದಿಗೂ ಇದೇ ಕ್ರಮದಲ್ಲಿ ಹೊಳೆನರಸೀಪುರದ ಬ್ರಹ್ಮೀಭೂತ ಶ್ರೀಶ್ರೀಸಚ್ಚಿದಾನನ್ದೇನ್ದ್ರಸರಸ್ವತೀಯತಿಗಳ ಪಾಠಕ್ರಮದಂತೆ ಶಾಙ್ಕರಭಾಷ್ಯಪಾಠಗಳು ಮುಂದುವರೆಯುತ್ತಿವೆ. ಇಷ್ಟೇ ಅಲ್ಲದೆ ಶ್ರೀಶ್ರೀಗಳವರ ಸಂಸ್ಕೃತಭಾಷೆಯ ಮೇರು ಕೃತಿಗಳಾದ ಸುಗಮಾ, ಮಾಂಡೂಕ್ಯರಹಸ್ಯವಿವೃತಿಃ, ವೇದಾನ್ತಪ್ರಕ್ರಿಯಾಪ್ರತ್ಯಭಿಜ್ಞಾ ಮುಂತಾದ ಕೃತಿಗಳ ಅಧ್ಯಯನವೂ ಕೂಡ ನಡೆಯುತ್ತಿದೆ. ಈ ಪಾಠಗಳೆಲ್ಲವೂ YouTube kkvp ನಲ್ಲಿ ಲಭ್ಯವಿವೆ.
ನಮ್ಮ ಪಾಠಶಾಲೆಯ ಆಶ್ರಯದಲ್ಲಿ ಭಾರತದೇಶದ ಪ್ರಸಿದ್ಧ ವೇದಾನ್ತಪ್ರವಚನಕಾರರುಗಳಿಂದ ಅದ್ವೈತಸಿದ್ದಾನ್ತದ ವಿವಿಧ ಪ್ರಕರಣಗಳ ವಿಷಯಗಳನ್ನು ಕುರಿತಾದ ಪ್ರವಚನಗಳೂ ಆನ್ ಲೈನ್ ಮಾಧ್ಯಮದಲ್ಲಿ ನಿಯತವಾಗಿ ಆಯೋಜಿಸಲ್ಪಡುತ್ತಿದೆ. ಈ ಪ್ರವಚನಗಳನ್ನು ನಡೆಸಿಕೊಟ್ಟಿರುವವರಲ್ಲಿ ಮಹಾಮಹೋಪಾಧ್ಯಾಯ ಡಾ|| ಕೆ.ಜಿ. ಸುಬ್ರಾಯಶರ್ಮಾ, ಸ್ವಾಮೀ ಕೈವಲ್ಯಾನನ್ದಸರಸ್ವತೀ, ಕೀರ್ತಿಶೇಷ ಡಾ|| ಎಮ್.ಎಲ್. ನರಸಿಂಹಮೂರ್ತಿ, ಡಾ|| ಕುಪ್ಪ ವಿಶ್ವನಾಥಶರ್ಮಾ, ವಿದ್ವಾನ್ ಡಾ|| ವೇಣೀಮಾಧವಶಾಸ್ತ್ರೀ ಜೋಷೀ, ಡಾ|| ಎಚ್.ವಿ. ನಾಗರಾಜರಾವ್, ಡಾ|| ಟಿ.ವಿ. ಸತ್ಯನಾರಾಯಣ, ಮಹಾಮಹೋಪಾಧ್ಯಾಯ ಡಾ|| ಎಸ್. ರಂಗನಾಥ್, ವಿದುಷಿ ಮಂಜುಶ್ರೀಹೆಗ್ಡೆ, ವಿದುಷಿ ಡಾ|| ಎಸ್.ಆರ್. ಲೀಲಾ ಮೊದಲಾದವರು ಮುಖ್ಯರಾಗಿದ್ದಾರೆ.
ನಮ್ಮ ಪಾಠಶಾಲೆಯು ಭಾಷ್ಯಪೀಯೂಷಧಾರಾ ಎಂಬ ಮೊಬೈಲ್ ಆಪ್ ಅನ್ನು ಸಿದ್ಧಮಾಡಿ ಬಿಡುಗಡೆಮಾಡಿದೆ. ಅದರಲ್ಲಿ ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ ಮತ್ತು ಐತರೇಯ ಉಪನಿಷತ್ತುಗಳ ಮನ್ತ್ರಗಳು ಹಾಗೂ ಅವುಗಳಿಗೆ ಶಾಙ್ಕರಭಾಷ್ಯ ಮತ್ತು ಭಗವಾನ್ ಬಾದರಾಯಣಾಚಾರ್ಯರ ವೇದಾನ್ತಮೀಮಾಂಸಾಸೂತ್ರಗಳು (ಪೂರ್ಣವಾಗಿ), ಅದರಲ್ಲಿ ಅಧಿಕರಣಪಞ್ಚಕಕ್ಕೆ ಶಾಙ್ಕರಭಾಷ್ಯ ಈ ಎಲ್ಲವೂ ಲಿಪಿಯ ಮೂಲಕ ಹಾಗೂ ಧ್ವನಿಯ ಮೂಲಕ ಲಭ್ಯವಿವೆ. ಯಾವುದೇ Android ಮೊಬೈಲ್‌ನ Play Store ನಲ್ಲಿ KKVP ಎಂದು type ಮಾಡಿ ಶುಲ್ಕವಿಲ್ಲದೆ free download ಮಾಡಿಕೊಂಡು ಪ್ರತಿದಿನವೂ ನಮ್ಮ ಭಾರತದೇಶದ ಅನರ್ಘ್ಯಸಂಪತ್ತಾಗಿರುವ ಉಪನಿಷನ್ಮಂತ್ರಗಳನ್ನೂ ಹಾಗೂ ಶಾಙ್ಕರಭಾಷ್ಯಗಳನ್ನೂ ಕೇಳಬಹುದಾಗಿದೆ.
ಈ ಜಾಲತಾಣದ ತ್ರೈಮಾಸಿಕ ನಿಯತಕಾಲಿಕೆ (journal) ಸುಧಾಸಿಞ್ಚನ ವಿಭಾಗದಲ್ಲಿ ಶಾಸ್ತ್ರ ಹಾಗೂ ಸಾಹಿತ್ಯಗಳಿಗೆ ಸಂಬನ್ಧಿಸಿದ ವಿಷಯಗಳನ್ನು ಕುರಿತಾದ ಅಧ್ಯಯನಯೋಗ್ಯವಾದ ಲೇಖನಗಳು ದೇಶವಿದೇಶದ ಪ್ರಸಿದ್ಧವಿದ್ವಾಂಸರುಗಳಿಂದ ಪ್ರಕಟವಾಗಲಿವೆ. ಜಿಜ್ಞಾಸುಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪ್ರಾರ್ಥನೆ.
ಹೋಮ್ ಪೇಜ್ ಶ್ಲೋಕಗಳ ರಾಗ ಸಂಯೋಜನೆ
ಸಂಗೀತದ ಗುರುಗಳು : ವಿದುಷಿ ಶ್ರೀಮತಿ ಗೀತಾ
ಹಾಡಿರುವವರು - ಶಿಷ್ಯೆಯರು
ಚಿ || ರಾಜಶ್ರೀ ಸ್ವಾತಿ
ಚಿ || ಜಯಶ್ರೀ ಶ್ರುತಿ
ಚಿ || ಚಿನ್ಮಯಿ
ಚಿ || ರಕ್ಷಿತಾ
ಚಿ || ಅಪೂರ್ವಾ
ಚಿ || ಶ್ರೇಯಾ